ಅಭಿಪ್ರಾಯ / ಸಲಹೆಗಳು

ನಿಕಾಯದ ಮುಖ್ಯಸ್ಥರು

ಪ್ರೊ. (ಡಾ.) ಜಿ.ಬಿ.ಪಾಟೀಲ

ನಿಕಾಯದ ಮುಖ್ಯಸ್ಥರು

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ 

 

 

         

         ಪ್ರೊ. (ಡಾ.) ಜಿ. ಬಿ. ಪಾಟೀಲರವರು ೧೯೮೮ ರಲ್ಲಿ ಕಾರ್ಮಿಕ ಕಾನೂನು ವಿಷಯದಲ್ಲಿ ತಮ್ಮ ಎಲ್.ಎಲ್.ಎಂ. ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ.  ಏಪ್ರಿಲ್ ೨೦೦೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ  ಧಾರವಾಡದಲ್ಲಿ ತಮ್ಮ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ಇವರು ಹುರಕಡ್ಲಿ ಅಜ್ಜಾ ಕಾನೂನು ಮಹಾವಿದ್ಯಾಲಯ, ಧಾರವಾಡ ಮತ್ತು ಕೆ.ಎಲ್.ಇ. ಸಂಸ್ಥಾನದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ, ಬೆಳಗಾವಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ, ಇದಲ್ಲದೆ ಕೆ.ಎಲ್.ಇ. ಸಂಸ್ಥಾನದ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿಯಲ್ಲಿ ಸಂಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ೩೩ ವರ್ಷ ಭೋಧನೆ ಮಾಡಿದ ಅನುಭವವಿದ್ದು ಇವರು ಕೆ.ಎಲ್.ಇ. ಸಂಸ್ಥೆಯ ಜಿ.ಕೆ.ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ೧೧ ವರ್ಷದವರೆಗೆ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದಾರೆ, ಹಾಗೂ ವಿವಿಧ ಗೌರವಾನ್ವಿತ ಸಂಸ್ಥೆಗಳಲ್ಲಿ ನಡೆದ ಅಂತರರಾಷ್ಟ್ರೀಯ/ರಾಷ್ಟ್ರೀಯ/ರಾಜ್ಯ ಮಟ್ಟದ ಸೆಮಿನಾರ್‌ಗಳು/ಸಮ್ಮೇಳನಗಳು/ ಕಾರ್ಯಾಗಾರಗಳಲ್ಲಿ ೬೦ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು ವಿವಿಧ ಕಾನೂನು ಜರ್ನಲ್‌ಗಳಲ್ಲಿ ೪೫ ಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಎಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ,  ಜೊತೆಗೆ  ಎರಡು ಸಣ್ಣ ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಮೂರು (0೩) ಅಭ್ಯರ್ಥಿಗಳು ಕಾನೂನಿನಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇತರೆ ನಾಲ್ಕು (0೪) ಅಭ್ಯರ್ಥಿಗಳು ಇವರ ಅಡಿಯಲ್ಲಿ ಪಿಎಚ್‌.ಡಿ. ವ್ಯಾಸಂಗ ಮಾಡುತ್ತಿದ್ದಾರೆ.

      ಪ್ರೊ. (ಡಾ.) ಜಿ. ಬಿ. ಪಾಟೀಲರವರು ೬ ವರ್ಷ ೧0 ತಿಂಗಳ ಕಾಲ ಕುಲಸಚಿವರು  (ಮೌಲ್ಯಮಾಪನ) ಆಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಸ್ತುತ ಇವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ  ಅಕಾಡೆಮಿಕ್ ಕೌನ್ಸಿಲ್ನ ಸದಸ್ಯರಾಗಿದ್ದಾರೆ ಮತ್ತು ಅಖಿಲ ಭಾರತ ಕಾನೂನು ಶಿಕ್ಷಕರ ಕಾಂಗ್ರೆಸ್ ನವದೆಹಲಿ ಮತ್ತು ಇಂಡಿಯನ್ ಸೊಸೈಟಿ ಆಫ್ ಕ್ರಿಮಿನಾಲಜಿ ತಮಿಳುನಾಡಿನ ಸದಸ್ಯರೂ ಆಗಿದ್ದಾರೆ. ಇವರು ವಿವಿಧ ರಾಷ್ಟ್ರೀಯ ಮಟ್ಟದ ಸೆಮಿನಾರ್‌ಗಳು / ಕಾರ್ಯಾಗಾರಗಳು / ವಿಚಾರ ಸಂಕಿರಣವನ್ನು ಯಶಸ್ವಿಯಾಗಿ ಸಂಯೋಜಿಸಿದ್ದಾರೆ.

          ಪ್ರೊ. (ಡಾ.) ಜಿ. ಬಿ. ಪಾಟೀಲರವರು ಕಾನೂನು ಸಾಕ್ಷರತೆ/ಕಾನೂನು ನೆರವು ಕಾರ್ಯಕ್ರಮಗಳನ್ನು ನಡೆಸಲು ಆಸಕ್ತಿ ವಹಿಸಿದ್ದಾರೆ. ಇವರ ಆಸಕ್ತಿಯ ಕ್ಷೇತ್ರಗಳು: ಕಂಪನಿ ಕಾನೂನು, ಸಾಂವಿಧಾನಿಕ ಕಾನೂನು, ಸಾಮಾಜಿಕ ನ್ಯಾಯ, ಕಾನೂನು ಮತ್ತು ಸಾಮಾಜಿಕ ಬದಲಾವಣೆ, ದೌರ್ಜನ್ಯಗಳ ಕಾನೂನು ಇತ್ಯಾದಿ.

ಪ್ರಸ್ತುತ ಇವರು ಕ.ರಾ.ಕಾ.ವಿ’ಯ ನಿಕಾಯದ ಮುಖ್ಯಸ್ಥರಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಮೋ: ೯೪೪೮೩ ೧೭೧೨೯

ಇ-ಮೇಲ್: patil_gb62@yahoo.com

 

 

 

ಇತ್ತೀಚಿನ ನವೀಕರಣ​ : 19-09-2023 02:05 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080