ಪಕ್ಷಿನೋಟ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಪಕ್ಷಿನೋಟ

        ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯು ಕಾನೂನು ವಿಶ್ವವಿದ್ಯಾಲಯದ ಒಂದು ಅಂಗ ಸಂಸ್ಥೆಯಾಗಿ ಸನ್ ೨೦೦೯ರಲ್ಲಿ ಕರ್ನಾಟಕ ಸರಕಾರದ ಶಾಸನಕ್ಕೆ ಅನುಗುಣವಾಗಿ ಪ್ರಾರಂಭವಾಯಿತು. ಇದರ ಮೂಲ ಉದ್ದೇಶವು ವಿಶ್ವವಿದ್ಯಾಲಯವನ್ನು ಬರಿ ಮಾತ್ರ ಕಾನೂನು ಮಾಹಾವಿದ್ಯಾಲಯಗಳ ನೊಂದಣಿ ಹಾಗೂ ಅವುಗಳ ಆಡಳಿತಕ್ಕೆ ಸೀಮಿತವಲ್ಲದೇ, ಕಲಿಕೆಗೂ ಪ್ರಾಮುಖ್ಯತೆ ನೀಡಬೇಕೆಂಬ ಉದ್ದೇಶದಿಂದ ಕಾನೂನು ಶಾಲೆಯನ್ನು ಪ್ರಾರಂಭಿಸಲಾಯಿತು. ಈ ಕಾನೂನು ಶಾಲೆಯು ಹುಬ್ಬಳ್ಳಿಯ ನವನಗರದಲ್ಲಿರುವಂತಹ ಕಾನೂನು ವಿಶ್ವವಿದ್ಯಾಲಯದ ವಿಸ್ತಾರಾವಾದ ಹಾಗೂ ಚೇತೋಹಾರಿಯಾದ ವಾತಾವರಣದಲ್ಲಿ, ವಿಶ್ವವಿದ್ಯಾಲಯದ ಆವರಣದಲ್ಲಿ ಕಲಿಕೆಯ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಈ ಶಾಲೆಯ ಪ್ರಾಧ್ಯಾಪಕ ವೃಂದ ಕಲಿಕೆಗೆ ಅರ್ಹ ಹಾಗೂ ಬದ್ಧತೆವುಳ್ಳವರಾಗಿದ್ದಾರೆ ಹಾಗೂ ಆ ನಿಟ್ಟಿನಲ್ಲಿ ಕಾರ್ಯ ತತ್ವರರಾಗಿದ್ದಾರೆ. ಪ್ರತಿಯೊಬ್ಬ ಪ್ರಾಧ್ಯಾಪಕ ತನ್ನ ವಿಷಯದಲ್ಲಿ ನಿರಂತರ ಸಂಶೋಧನೆ ಹಾಗೂ ಉನ್ನತ ಅಧ್ಯಯನದಲ್ಲಿ ತೊಡಗಿದವರಾಗಿದ್ದಾರೆ, ಅವರು ತಮ್ಮ ತಮ್ಮ ವಿಷಯಗಳಲ್ಲಿ ಸಂಶೋಧಿತ ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದೂ ಅಲ್ಲದೇ ಅವರನ್ನು ಅನೇಕ ವಿಶ್ವವಿದ್ಯಾಲಯಗಳಲ್ಲಿ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ನಮ್ಮ ಕಾನೂನು ವಿಶ್ವವಿದ್ಯಾಲಯದ ನೊಂದಾಯಿತ ಮಹಾವಿದ್ಯಾಲಯಗಳಲ್ಲಿ ಸಹ ಚರ್ಚಾಕೂಟ ಹಾಗೂ ಇತರೆ ಶೈಕ್ಷಣಿಕ ಕಾರ್ಯಗಾರಗಳಲ್ಲಿ ನಮ್ಮ ಪ್ರಾಧ್ಯಾಪಕ ವೃಂದವು ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದೆ.

      ಕಾನೂನು ಶಾಲೆಯು ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿಗಳಿಗಾಗಿ ಅನುವುಮಾಡಿಕೊಟ್ಟಿದೆ. ಪದವಿ ಹಂತದಲ್ಲಿ ಐದು ವರ್ಷದ ಸಂಯೋಜಿತ ಕಲಾ ಹಾಗೂ ಕಾನೂನು ಪದವಿ, ಅದರಂತೆ ಐದು ವರ್ಷಗಳ ವ್ಯವಹಾರ ಆಡಳಿತ ಹಾಗೂ ಕಾನೂನು ಪದವಿಗಳನ್ನು (Hons.) ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅದೂ ಅಲ್ಲದೇ, ಕಾನೂನು ಶಾಲೆಯು ಸಂವಿಧಾನಿಕ ಹಾಗೂ ಆಡಳಿತ ಕಾನೂನು ಮತ್ತು ಕಾರ್ಪೋರೇಟ್ ಹಾಗೂ ವ್ಯವಹಾರ ಕಾನೂನು ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗೆಳಿಗೆ ಪಠ್ಯಕ್ರಮವನ್ನು ನೀಡಲಾಗುತ್ತಿದೆ. ಎಲ್ಲ ಕಾನೂನು ಪದವಿಗಳ ಪಠ್ಯಕ್ರಮವು ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council Of India) ದ ಆದೇಶಗಳಂತೆ ಸಂಯೋಜಿಸಲಾಗಿದೆ. ಈ ಪಠ್ಯಕ್ರಮವು ನಿರಂತರ ಮೌಲ್ಯಮಾಪನ ಹಾಗೂ ದ್ವೈ ವಾರ್ಷಿಕ ಪರೀಕ್ಷೆಗಳನ್ನು ಹೊಂದಿರುತ್ತವೆ. ಈ ಪಠ್ಯಕ್ರಮಗಳ ಸಂಪೂರ್ಣವಾಗಿ ವೃತ್ತಿಪರ ಹಾಗೂ ಸಂಶೋಧನೆ ಯುಕ್ತವಾಗಿರುತ್ತದೆ.

        ಕಾನೂನು ಶಾಲೆಯು ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಿ ಅದರಲ್ಲಿ ತೆರ್ಗಡೆ ಹೊಂದಿದ ಅರ್ಹ ವಿಧ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಅದರಂತೆ ಪ್ರವೇಶವನ್ನು ನೀಡುತ್ತದೆ. ಈ ಪ್ರವೇಶಕ್ಕಾಗಿಯೂ ರಾಜ್ಯ ಸರಕಾರದ ಮೀಸಲಾತಿ ಹಾಗೂ ಸರಕಾರದಿಂದ ಆದೇಶಿಸಲ್ಪಟ್ಟಂತಹ ಶುಲ್ಕ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣೆಗೆಗಾಗಿ ಪರಿಣಿತರಿಂದ ಹಾಗೂ ಉನ್ನತ ಹಾಲೀ ಹಾಗೂ ಮಾಜಿ ನ್ಯಾಯಾಧೀಶರಿಂದ ವರ್ಷವಿಡೀ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಂಡಿರುತ್ತದೆ. ಹೊರಗಿನಿಂದ ಬರುವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಲುವಾಗಿ ಪ್ರತ್ಯೇಕ ವಸತಿನಿಲಯಗಳ ವ್ಯವಸ್ಥೆ ಇರುತ್ತದೆ.

        ವಿದ್ಯಾರ್ಥಿಗಳ ವೃತ್ತಿಪರ ಬೆಳವಣೆಗೆಗಾಗಿ ಕಾನೂನು ಶಾಲೆಯು ವರ್ಷಕ್ಕೆ ಎರೆಡು ಬಾರಿ ಅಣಕುನ್ಯಾಯಾಲಯ ಸ್ಪರ್ಥೆಗಳನ್ನು ಏರ್ಪಡಿಸುತ್ತದೆ. ಇದರಲ್ಲಿ ಒಂದು ರಾಜ್ಯಮಟ್ಟ ಹಾಗೂ ಇನ್ನೂಂದು ರಾಷ್ಟ್ರ ಮಟ್ಟದ ಸ್ಪರ್ಧೆಗಳಿರುತ್ತವೆ. ಕಾನೂನು ಶಾಲೆ ವಿದ್ಯಾರ್ಥಿಗಳನ್ನು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೂ ಅಲ್ಲದೆ, ಬೇರೆ ಬೇರೆ ಅಣಕು ನ್ಯಾಯಾಲಯಗಳ ಸ್ಪರ್ಧೆಗಳಲ್ಲೂ ಸಹ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪಾರಿತೋಷಿತ ಹಾಗೂ ನಗದು ಬಹುಮಾನಗಳನ್ನು ಗೆದ್ದಿದ್ದಾರೆ. ಇದಲ್ಲದೇ, ಕಾನೂನು ವಿಶ್ವವಿದ್ಯಾಲಯು ಎಲ್ಲ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸನ್ಮಾನ ಹಾಗೂ ನಗದು ಪಾರಿತೋಷಕ ನೀಡುತ್ತದೆ. ಕಾನೂನು ಮಹಾವಿದ್ಯಾಲಯವು ವಿದ್ಯಾರ್ಥಿಗಳ ಸಂಶೋಧನಾತ್ಮಕ ಗುಣಗಳನ್ನು ಪ್ರೋತ್ಸಾಹಿಸಿ ಅವರಿಗೆ ಸಂಶೋಧನಾ ಬರಹ ಬರೆಯಲು ಪ್ರೂತ್ಸಾಹಿಸುತ್ತದೆ ಈ ಸಂಶೋಧನಾತ್ಮಕ ಬರಹಗಳಿಂದ ವಿದ್ಯಾರ್ಥಿಗಳಿಗೆ ರಾಷ್ಟ್ರಿಯ ಮಟ್ಟದಲ್ಲಿ ಒಂದು ವೇದಿಕೆಯನ್ನು ಕಲ್ಪಿಸಿದಂತಾಗುತ್ತದೆ. ಕಾನೂನು ಶಾಲೆಯು ತನ್ನ ವಿದ್ಯಾರ್ಥಿಗಳ ಸಲುವಾಗಿ ಒಂದು ಕಾಯ್ದೆ ಮಾಸಿಕ ವನ್ನು ಪ್ರಕಟಿಸುತ್ತದೆ. ಈ ಮಾಸಿಕದ ಎಲ್ಲ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳೇ ಪ್ರಾಧ್ಯಾಪಕರ ಮಾರ್ಗದರ್ಶನದಿಂದ ನಿರ್ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ವೃತ್ತಿಪರದಿಂದ ತರಬೇತಿಯನ್ನು ಸಹ ಕೊಡಿಸುವ ಯೋಜನೆ ಇರುತ್ತದೆ. ಕಾನೂನು ಶಾಲೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೆಸರಾಂತ ಕಾನೂನು ಸಂಸ್ಥೆಗಳಲ್ಲಿ, ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ತರಬೇತಿಯನ್ನು ಕೊಡಿಸುವ ಯೊಜನೆಯನ್ನು ಸಹ ಹಾಕಿಕೊಂಡಿರುತ್ತದೆ. 

       ವಿದ್ಯಾರ್ಥಿಗಳನ್ನು ಸಮಾಜಿಕ ಪ್ರಜೆ ಮಾಡಲು ಕಾನೂನು ಶಾಲೆಯು ವಿದ್ಯಾರ್ಥಿಗಳನ್ನು ನಗರದ ಹಾಗೂ ಗ್ರಾಮೀಣ ಪ್ರದೇಶದ ಬಡಜನರಿಗಾಗಿ ಉಚಿತ ಕಾಯ್ದೆ ತಿಳುವಳಿಕೆ ಕಾರ್ಯಕ್ರಮಗಳನ್ನು ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ವಿಶ್ವವಿದ್ಯಾಲಯದ ಮಾರ್ಗ ದರ್ಶನ ಹಾಗೂ ಶಾಲೆಯ ಎನ್.ಎಸ್.ಎಸ್. ವಿಭಾಗದಿಂದ ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಎನ್.ಎಸ್.ಎಸ್. ವಿಭಾಗದ ಸಂಯೋಜನೆಯಿಂದ ಆಯಾ ಪ್ರದೇಶದ ಜನತೆಗೆ ಕಾನೂನಿನ ಅರಿವು ತಿಳುವಳಿಕೆಗೆ ಚಿಕ್ಕಚಿಕ್ಕ ರಸ್ತೆ ಬದಿ ನಾಟಕಗಳ ಮುಖಾಂತರ ಜನರಲ್ಲಿ ಕಾನೂನು ಜಾಗ್ರತೆ ಮೂಡಿಸುತ್ತಾರೆ. ಕಾನೂನು ಶಾಲೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಾನೂನು ಶಾಲೆಯು ತನ್ನ ಸಮಾಜಿಕ ಬದ್ಧತೆಗಾಗಿ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಸರಕಾರಿ ಹಾಗೂ ಸರಕಾರೇತರ ನೌಕರರಿಗಾಗಿ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಗಾಗಿ ಆಯೋಜಿಸುತ್ತಿದೆ.

ಇತ್ತೀಚಿನ ನವೀಕರಣ​ : 05-04-2021 12:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ