ಪಕ್ಷಿನೋಟ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ ಹುಬ್ಬಳ್ಳಿ

            ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೃತ್ತಿಪರ ಶಿಕ್ಷಣ ಮತ್ತು ಸಂಶೋಧನಾ ಅಗತ್ಯಗಳನ್ನು ಪೂರೈಸುವಸಲುವಾಗಿ ಆಗಸ್ಟ ೨೦೦೯ ರಲ್ಲಿ ಗ್ರಂಥಾಲಯವನ್ನು ಸ್ಥಾಪಿಸಲಾಯಿತು. ಈ ಪ್ರದೇಶದ ಶ್ರೇಷ್ಠ ಗ್ರಂಥಾಲಯ ಎಂಬ ವಿಶಿಷ್ಟಖ್ಯಾತಿಯನ್ನು ಹೊಂದಿದೆ, ಇದು ಕಾನೂನು ಸಂಬಂಧಿತ ಪ್ರಕಟಣೆಗಳ ಅತ್ಯತ್ತಮ ಸಂಗ್ರಹವಾಗಿದೆ.

 

ಧ್ಯೇಯ

 

                ಎಲ್ಲಾ ಬಳಕೆದಾರರಿಗೆ ಗುಣಮಟ್ಟದ ಗ್ರಂಥಾಲಯದ ಮಾಹಿತಿ ಸೇವೆಯನ್ನು ಒದಗಿಸಲು ಕೆಎಸ್‌ಎಲ್‌ಯು ಗ್ರಂಥಾಲಯ ಬದ್ಧವಾಗಿದೆ. ಉನ್ನತ ಶಿಕ್ಷಣದ ಮೂಲಕ ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಪೂರಕ ಪೂರಕ ಸಾಹಿತ್ಯ ಸೇವೆ ಒದಗಿಸುವದು ನಮ್ಮ ಉದ್ದೇಶ.

 

 

ದೂರದೃ಼ಷ್ಟಿ

 

                 ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಸಾಂವಿಧಾನಿಕ ಪ್ರಾಥಮಿಕ ಗುರಿಯನ್ನು ಸಾಕಾರಗೊಳಿಸಲು ಮತ್ತು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಮಾನವ ಹಕ್ಕುಗಳನ್ನು ಸುರಕ್ಷಿತಗೊಳಿಸಲು ಗುಣಮಟ್ಟದ ಕಾನೂನು ಶಿಕ್ಷಣವನ್ನು ವೃತ್ತಿಪರವಾಗಿ ಸಮರ್ಥ ಮತ್ತು ಸಾಮಾಜಿಕವಾಗಿ ಪ್ರಸ್ತುತಪಡಿಸುವ ಮೂಲಕ ಗ್ರಂಥಾಲಯ ಬಳಕೆದಾರರನ್ನು ಸಮಾಜದ ಬಗ್ಗೆ ಕಾನೂನುಬದ್ಧವಾಗಿ ಜಾಗೃತರನ್ನಾಗಿ ಮಾಡುವುದು.

 

ಉದ್ದೇಶ

 

೧)           ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗ್ರಂಥಾಲಯುವು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಶೈಕ್ಷಣಿಕ ಮತ್ತು ಸಂಶೋಧನಾ ಅಗತ್ಯಗಳನ್ನು ಪೂರೈಸುವದು

೨)           ಗ್ರಂಥಾಲಯದ ಉದ್ದೇಶಗಳು

೩)           ನ್ಯಾಯಂಗ ವ್ಯವಸ್ಥೆಯನ್ನು ಬೆಂಬಲಿಸಿ ಬಲಪಡಿಸುವದು;

೪)           ಕಾನೂನು ಮತ್ತು ನ್ಯಾಯಾಂಗ ಸಂಶೋಧನಾ ಕೇಂದ್ರವನ್ನು ಅಭಿವೃದ್ದಿಪಡಿಸುವದು;

೫)           ಶಿಕ್ಷಣತಜರಿಗೆ ನ್ಯಾಯಾಧಿಶರುಗಳಿಗೆ ಪ್ರಾಸಿಕ್ಯೂಟರಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಉಲ್ಲೇಖ ಸಂಗ್ರಹ ಒದಗಿಸುವದು;

೬)           ವಿವಿಧ ಕಾನೂನು ಗ್ರಂಥಾಲಯಗಳ ನಡುವೆ ಸಮಾನ ವೇದಿಕೆಯನ್ನು ನಿರ್ಮಿಸುವದು;

೭)           ವಿಶಿಷ್ಠ ಕಾನೂನು ಗ್ರಂಥಾಲಯ ಹೊಂದಿ, ಕಾನೂನು ಶಿಕ್ಷಣವೇತ್ತರಿಗೆ ಅನಕೂಲಮಾಡಿಕೊಡುವದು.

 

 

ಗ್ರಂಥಾಲಯ ಸಂಗ್ರಹದ ವಿವಿರ

 

                ಗ್ರಂಥಾಲಯ ಸಂಗ್ರಹವು ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಪುಸ್ತಕಗಳು, ನಿಯತಕಾಲಿಕೆಗಳು, ವರದಿಗಳನ್ನು ಒಳಗೊಂಡಿದೆ. ಸಂಗ್ರಹವು ಕಾನೂನು ಮತ್ತು ಸಂಬಂಧಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.  ವಿಶ್ವವಿದ್ಯಾಲಯವು ವಿನ್ಯಾಸಗೊಳಿಸಿದ ಪಠ್ಯಕ್ರಮದ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಉಲ್ಲೇಖ ಸಂಗ್ರಹದಲ್ಲಿ ನಿಘಂಟುಗಳು, ಡೈರೆಕ್ಟರಿಗಳು, ಪ್ರಬಂಧಗಳು, ವಿಶ್ವಕೋಶಗಳು ಮತ್ತು ಕೈಪಿಡಿಗಳು ಸೇರಿವೆ. ಓದುವ ಸಾಮಗ್ರಿಗಳು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಸ್ವರೂಪಗಳಲ್ಲಿವೆ.

                               

ಸಂಖ್ಯೆ    

 

ಮಾಹಿತಿ

ಒಟ್ಟು ಸಂಗ್ರಹ

ಪುಸ್ತಕಗಳು

೧೪೦೩೫

ದೇಣಿಗೆ ಪುಸ್ತಕಗಳು

೧೩೧೮

ಸಂಪುಟಗಳು

೫೦೩೮

ಪ್ರಬಂಧಗಳು

೧೯೮

ಪ.ಜಾತಿ/ಪ.ಪಂಗಡ ಪುಸ್ತಕಗಳು

೯೬೦

ಜನಪ್ರಿಯ ನಿಯತಕಾಲಿಕೆಗಳು

೨೫

 

 

 

ಇತ್ತೀಚಿನ ನವೀಕರಣ​ : 06-11-2023 04:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ