ಅಭಿಪ್ರಾಯ / ಸಲಹೆಗಳು

ಸಹಾಯಕ ಕುಲಸಚಿವರು

ಡಾ. ಡಿ. ರಂಗಸ್ವಾಮಿ

ಸಹಾಯಕ ಕುಲಸಚಿವರು (ಆಡಳಿತ)

 

     ಡಾ. ಡಿ. ರಂಗಸ್ವಾಮಿ, ಇವರು ೨೦೦೦ ಇಸವಿಯಲ್ಲಿ ಬಿ. ಎ. ಪದವಿಯನ್ನು ಜೆ.ಎಸ್.ಎಸ್. ಕಾಲೇಜು ನಂಜನಗೂಡಿನಿಂದಲೂ, ೨೦೦೧ ರಲ್ಲಿ ಎಲ್‌ಎಲ್.ಬಿ. ಪದವಿಯನ್ನು ವಿದ್ಯಾವರ್ಧಕ ಕಾನೂನು ಕಾಲೇಜು, ಮೈಸೂರಿನಿಂದಲೂ ೨೦೦೭ ರಲ್ಲಿ ಎಲ್‌ಎಲ್.ಎಮ್. ಹಾಗೂ ೨೦೧೩ ರಲ್ಲಿ ಪಿಹೆಚ್.ಡಿ. ಪದವಿಯನ್ನು ಕಾನೂನು ಮತ್ತು ಸಂಶೋಧನಾ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರಿನಿಂದಲೂ ಪಡೆದಿರುತ್ತಾರೆ. ತಮ್ಮ ಸ್ನಾತಕೊತ್ತರ ಪದವಿಯ ನಂತರ ಶಾರದಾ ವಿಲಾಸ ಕಾನೂನು ಕಾಲೇಜು, ಮೈಸೂರು ಇಲ್ಲಿ ೨೦೦೭ ರಿಂದ ೨೦೦೯ ರವರೆಗೆ ಕಾನೂನು ಉಪನ್ಯಾಸಕರಾಗಿ ಕಾರ್ಯವನ್ನು ನಿರ್ವಹಿಸಿರುತ್ತಾರೆ. ೨೦೦೯ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ ಜುಲೈ ೨೦೧೩ ರವರೆಗೆ ಸರ್ಕಾರಿ ಕಾನೂನು ಕಾಲೇಜು ರಾಮನಗರ ಇಲ್ಲಿ ಸಹಾಯಕ ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಜುಲೈ ೨೦೧೩ ರಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಹಾಯಕ ಕಾನೂನು ಪ್ರಾಧ್ಯಾಪಕರಾಗಿ ಸೇವೆಗೆ ಸೇರಿರುತ್ತಾರೆ. ಸಂವಿಧಾನಾತ್ಮಕ ಕಾನೂನು, ಮಾನವ ಹಕ್ಕುಗಳ ಕಾನೂನು, ಮಹಿಳೆ ಮತ್ತು ಕಾನೂನು, ಭ್ರಷ್ಟಾಚಾರ ನಿಯಂತ್ರಣ ಕಾನೂನು, ಕಾನೂನು ಮತ್ತು ನ್ಯಾಯ, ವೃತ್ತಿ ಸಂಹಿತೆ ಮತ್ತು ಸಾರ್ವಜನಿಕ ಅಂತರಾಷ್ಟ್ರೀಯ ಕಾನೂನುಗಳಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿರುತ್ತಾರೆ. ದಿನಾಂಕ ೭ ಮತ್ತು ೮ ನೇ ಅಕ್ಟೋಬರ್ ೨೦೧೮ ರಲ್ಲಿ ಶ್ರೀಲಂಕಾದ ಕೋಲಂಬೊ ನಗರದ ಜಯವರ್ಧನಪುರ ವಿಶ್ವವಿದ್ಯಾಲಯ ಆಯೋಜಿಸಿದ್ದ “ಸುಸ್ಥಿರ ಅಭಿವೃದ್ಧಿ ಮತ್ತು ಸುಆಡಳಿತ” ಅಂತರಾಷ್ಟ್ರೀಯ ಸಮ್ಮೇಳನದಲ್ಲಿ, “ನ್ಯಾಯಾಂಗ ಹೊಣೆಗಾರಿಕೆ: ಭಾರತೀಯ ನ್ಯಾಯ ಶಾಸ್ತ್ರದ ಅಂತ್ಯ ಕಾಣದ ವಸ್ತು ವಿಷಯ” ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿರುತ್ತಾರೆ.
ಭಾರತೀಯ ಸಾಮಾಜಿಕ ಸಂಶೋಧನಾ ಸಂಸ್ಥೆ ನವದೆಹಲಿ ಇವರ ಧನ ಸಹಾಯದಲ್ಲಿ “ಸಂತ್ರಸ್ಥ ಪರಿಹಾರ ಯೋಜನೆ: ಕರ್ನಾಟಕದಲ್ಲಿ ಇದರ ಜಾರಿಯ ಟೀಕಾತ್ಮಕ ಅಧ್ಯಯನ” ಎಂಬ ಸಂಶೋಧನಾ ಪ್ರಾಜೆಕ್ಟನ್ನು ಪೂರ್ಣಗೊಳಿಸಿರುತ್ತಾರೆ. ಸುಮಾರು ೩೦ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಸುಮಾರು ೪೦ಕ್ಕೂ ಅಧಿಕ ವಿವಿಧ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಮ್ಮೇಳನ/ಕಾರ್ಯಾಗಾರ/ಕಮ್ಮಟಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ.
     ಬೋಧನಾ ಕಾರ್ಯಬಾರದ ಜೊತೆಗೆ ಸಹಾಯಕ ಕುಲಸಚಿವರು (ಆಡಳಿತ), ಸಂಯೋಜಕರು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಘಟಕ, ನಿಲಯಪಾಲಕರು, ಬಾಲಕರ ವಸತಿ ನಿಲಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇವುಗಳ ಪ್ರಭಾರವನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ.

ಇತ್ತೀಚಿನ ನವೀಕರಣ​ : 06-09-2021 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080