ಅಭಿಪ್ರಾಯ / ಸಲಹೆಗಳು

ನಿರ್ದೇಶಕರು ಪ್ರಭಾರ ದೈಹಿಕ ಶಿಕ್ಷಣ

ಡಾಖಾಲೀದ ಖಾನ

ನಿರ್ದೇಶಕರು ಪ್ರಭಾರ ದೈಹಿಕ ಶಿಕ್ಷಣ 
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ 
 

            ಡಾ. ಖಾಲೀದ ಖಾನ (ಎಮ್.ಪಿ.ಎಡ್.,)(ಎಮ್.ಪಿ.ಎಲ್.,)ಎನ್.ಐ.ಎಸ್.,ಪಿ.ಎಚ್.ಡಿರವರು ಶ್ರೀ. ಗಜಾನನ ಪ್ರಭುರವರ ಮಾರ್ಗದರ್ಶನದಲ್ಲಿ ಮಂಡಿಸಲಾದ “A Study on Proprioception and Balance ability in sports persons belonging to indigenous and Non-indigenous sports” ಪ್ರಬಂದಕ್ಕೆ ಶಿವಮೊಗ್ಗ ವಿಶ್ವವಿದ್ಯಾಲಯವು ಸನ್೨೦೧೮ನೇ ಸಾಲಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ. ಇವರ ವಿಶೇಷತೆ ಆಯ್ಕೆಯ ವಾಲೀಬಾಲನಲ್ಲಿ ೨೦೦೨ರಲ್ಲಿ ಜರುಗಿದ ಎನ್.ಐ.ಎಸ್. ಪರೀಕ್ಷೆಯಲ್ಲಿ ಮೊದಲನೆ ಶ್ರೇಣಿಯಲ್ಲಿ ಮತ್ತು ಎಮ್.ಪಿ.ಎಡ್ ನಲ್ಲಿ ೩ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶ್ರೀಯುತರು ತಮ್ಮ ವೃತ್ತಿ ಜೀವನವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಪ್ರಾರಂಭಿಸಿ ೨೦೦೮ರಿಂದ ೨೦೧೦ರ ವರೆಗೆ ಬೋಧನಾ ಸಹಾಯಕರಾಗಿಯು ಕೆಲಸವನ್ನು ಮಾಡಿರುತ್ತಾರೆ. ವಾಲೀಬಾಲ ತರಬೇತಿದಾರರಾಗಿ ಕೇಂದ್ರಿಯ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ೩೧ನೇ ಜೂನಿಯರ ರಾಷ್ಟ್ರೀಯ ಪುರುಷ ವಾಲೀಬಾಲ ಪಂದ್ಯಾವಳಿಗೆ ಕರ್ನಾಟಕ ತಂಡದ ಮುಖ್ಯ ತರಬೇತಿದಾರರಾಗಿದ್ದರು, ೨೦೦೨ರಿಂದ ೨೦೧೦ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ವಾಲೀಬಾಲ ತಂಡಕ್ಕೆ ಮುಖ್ಯ ತರಬೇತಿದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ವಾಲೀಬಾಲ್, ಹ್ಯಾಂಡಬಾಲ್ ಮತ್ತು ನೆಟಬಾಲ್ ತಂಡಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಮತ್ತು ಎಸ್ ಅಟ್ಯಾಕರ ಆಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಜೂನಿಯರ ರಾಷ್ಟ್ರೀಯ ಪುರುಷ ವಾಲಿಬಾಲ ತಂಡಗಳನ್ನು ಪ್ರತಿನಿಧಿಸಿರುತ್ತಾರೆ. ಸನ್ ೨೦೧೦ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಲ್ಲಿ ಕ್ರೀಡಾ ನಿರ್ದೇಶಕರಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ.

 

 ಹೆಸರು: ಡಾ. ಖಾಲೀದ ಖಾನ

 ದೂರವಾಣಿ: ೦೮೩೬-೨೨೨೦೦೨೪

 ಮಿಂಚಂಚೆ: kslu.Physicaldirector@gmail.com

ಇತ್ತೀಚಿನ ನವೀಕರಣ​ : 14-09-2023 03:58 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080